Astro-Vision Logo
Indian Astrology Software
Home Contact us Sitemap Faq

ಜ್ಯೋತಿರ್ದೃಷ್ಟಿ ತಂತ್ರಾಂಶ – 11 : ಜ್ಯೋತಿಷ್ಯಕಾರರಿಗೊಂದು ವಿಶ್ವಾಸಾರ್ಹ ಜ್ಯೋತಿಷ್ಯ ತಂತ್ರಾಂಶ.

INR 5790
Astrovision Astropack 11


Astro Pack 11 Astrology Software is also available in English + any one of the following languages :
Astrology Software Tamil Astrology Software Telugu Astrology Software Malayalam

FREE: Popular Kannada Panchanga Software with Kannada Astrology Software.
Request For a Demo

How to uninstall?
Open Programs and Features by clicking the Start button, clicking Control Panel, clicking Programs, and then clicking Programs and Features

Select The software you want to uninstall and then click Uninstall.
Read in Kannada

ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿರುವ ಜ್ಯೋತಿಷ್ಯದ ಕನ್ನಡ ತಂತ್ರಾಂಶ

ಜಗತ್ತಿನಾದ್ಯಂತ ಎಲ್ಲ ಪ್ರಸಿದ್ಧ ಜ್ಯೋತಿಷಿಗಳಿಂದ ಉಪಯೋಗಿಸಲ್ಪಡುತ್ತಿರುವ ಮತ್ತು ಜನಪ್ರೀಯವಾಗಿರುವ ಈ “ಅಸ್ಟ್ರೋ-ವಿಜನ್” (ಜ್ಯೋತಿರ್ದೃಷ್ಟಿ) ತಂತ್ರಾಂಶದ ಕನ್ನಡ ಅವತರಣಿಕೆಯು ಕಳೆದ 25 ವರ್ಷಗಳಿಂದಲೂ ಉಪಯೋಗಿಸಲ್ಪಡುತ್ತಿದೆ. ನಮ್ಮ ಕನ್ನಡ ಜ್ಯೋತಿಷ್ಯ ತಂತ್ರಾಂಶವು ಭಾರತದಲ್ಲಿ ಮತ್ತು ವಿದೇಶಗಳಲ್ಲಿಯೂ ಗ್ರಾಹಕರಿಗೆ ಅನುಕೂಲಕರವಾಗಿದೆ.

ಕನ್ನಡದ ಸೂಕ್ತ ಜ್ಯೋತಿರ್ದೃಷ್ಟಿಯ ತಂತ್ರಾಂಶ:

ನಮ್ಮ ಈ ಕನ್ನಡ ತಂತ್ರಾಂಶವು ಅತ್ಯಂತ ನಿಖರವಾದ ಹಾಗೂ ಅತ್ಯಂತ ಅಮೂಲ್ಯವಾದ ಗಣನ ಕ್ರಮಾಂಕವನ್ನು ಮತ್ತು ಭವಿಷ್ಯ ಜ್ಞಾನವನ್ನು ತಿಳಿಯಲು ಸಹಕಾರಿಯಾಗಿದೆ. ಜ್ಯೋತಿಷ್ಯ ಶಾಸ್ತ್ರದ ಗಣನ ಪದ್ಧತಿಯಲ್ಲಿ ಅತ್ಯಂತ ನಿಖರತೆಯನ್ನು ಕಾಯ್ದುಕೊಳ್ಳುವಲ್ಲಿ ಇದು ಪೂರ್ತಿ ವ್ಯವಸ್ಥೆ ಹೊಂದಿರುತ್ತದೆ. ದೀರ್ಘಾವದಿಯಲ್ಲಿ ಇದು ಸಂಪೂರ್ಣವಾಗಿ ಪರೀಕ್ಷಿಸಲ್ಪಟ್ಟಿದೆ. ಈ ಮೂಲಕ ನೀವು ಜ್ಯೋತಿಷ್ಯ ಶಾಸ್ತ್ರದ ವಿಶ್ಲೇಷನೆ ಮಾಡಬಹುದಾಗಿದೆ.

ವೇದದ ಪ್ರಾಮಾಣ್ಯದಲ್ಲಿಯೇ ಗಣನ ಪದ್ಧತಿ:

ಈ ಅಸ್ಟ್ರೋ-ವಿಜನ್ ಕನ್ನಡ ಜ್ಯೋತಿಷ್ಯ ಶಾಸ್ತ್ರದ ತಂತ್ರಾಂಶವು, ಜ್ಯೋತಿಷ್ಯ ಶಾಸ್ತ್ರದ ವಿಶ್ಲೇಷಣೆಗಾಗಿ ಹಾಗೂ ಜ್ಯೋತಿಷ್ಯದ ಸಲಹೆಗಾಗಿ, ವೇದದ ಪ್ರಾಮಾಣ್ಯವನ್ನು ಅನುಸರಿಸಿದಂತೆಯೇ ರೂಪಿಸಲ್ಪಟ್ಟಿದೆ. ಒಂದು ವೇಳೆ ನೀವು ಇಂಥ ಗಣನ ಪದ್ಧತಿಯನ್ನು ಹೊಂದಿರುವ ಯಾವುದೇ ತಂತ್ರಾಂಶವೊಂದು ಬೇಕೆಂದು ಬಯಸುತ್ತಿದ್ದಲ್ಲಿ, ಇದೋ, ಅಂತಹ ಎಲ್ಲ ಸವಲತ್ತುಗಳನ್ನು ಒಳಗೊಂಡ –ಅಸ್ಟ್ರೋ-ವಿಜನ್ ಕನ್ನಡ ಜ್ಯೋತಿಷ್ಯ ತಂತ್ರಾಂಶ ಇದೀಗ ನಿಮಗಾಗಿ ಇಲ್ಲಿ ಲಭ್ಯವಿದೆ.

ಅಯನಾಂಶಗಳನ್ನು ನಿಖರವಾಗಿ ಗುರುತಿಸುವದು:

ಅಯನಾಂಶಗಳಲ್ಲಿ ಹಲವಾರು ರೀತಿಯ ಗಣನಾ ಪದ್ಧತಿಗಳಿವೆ. ಉದಾಹರಣೆಗೆ- “ಚಿತ್ರಪಕ್ಷ ಅಯನಾಂಶ” ಅಥವಾ “ಲಾಹಿರಿ ಅಯನಾಂಶ”, “ರಾಮನ್ ಅಯನಾಂಶ”, “ಕೃಷ್ಣಮೂರ್ತಿ ಅಯನಾಂಶ”, “ತಿರುಕಂಠಂ ಅಯನಾಂಶ” ಅಥವಾ “ಫ್ರಾಂಕೆನ್ ಅಯನಾಂಶ” ಗಳ ಜೊತೆಗೆ ಸುಲಭವಾಗಿ ಬಳಸುವಂತೆ, ಆಯಾ ಗ್ರಾಹಕರ ಬಯಕೆಗೆ ತಕ್ಕಂತೆ ಗಣಿಸಬಹುದಾದ ಅಯನಾಂಶದ ಪದ್ಧತಿಯನ್ನು ಈ ತಂತ್ರಾಂಶವು ಹೊಂದಿರುತ್ತದೆ. ಇವೆಲ್ಲ ಸವಲತ್ತುಗಳು ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಭವಿಷ್ಯ ಹೇಳುವ ವೃತ್ತಿಯಲ್ಲಿರುವವರಿಗೆ ಹಾಗೂ ಇದರ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಅಲ್ಲದೇ ಜ್ಯಾತಿಷ್ಯ ಶಾಸ್ತ್ರದಲ್ಲಿ ಸಂಶೋಧನೆ ಮಾಡುವವರಿಗೂ ಸಹಕಾರಿಯಾಗಿದೆ.

ಅಪಾರ ಭೌಗೋಲಿಕ ಮಾಹಿತಿ:

ಜಗತ್ತಿನ ಎಲ್ಲ ಪ್ರಮುಖ ನಗರಗಳ ದತ್ತಾಂಶಗಳನ್ನು ನೀವು ಅಕ್ಷಾಂಶ/ರೇಖಾಂಶಾಗಳನ್ನು ಹಾಗೂ ಸೂರ್ಯೋದಯದ ಸಮಯವನ್ನು ಕುರಿತು ಸುಲಭವಾಗಿ ಮಾಹಿತಿ ಪಡೆಯಬಹುದು.ಅದೂ ಅಲ್ಲದೆ ಮತ್ತೂ ಬೇರೆ ಬೇರೆ ನಗರಗಳನ್ನು ಇಲ್ಲಿ ಸೇರಿಸಲು ಅವಕಾಶವಿದೆ.

ದಶ ವ್ಯವಸ್ಥೆ:

ದಶ ವ್ಯವಸ್ಥೆಯನ್ನು ನಿರ್ಧಿಷ್ಟ ಪಡಿಸುವಲ್ಲಿ ಇಲ್ಲಿ ಎರಡು ರೀತಿಯ ಪದ್ಧತಿಗಳಿವೆ. ಒಂದು ಪದ್ಧತಿಯಲ್ಲಿ 365.25 ದಿನಗಳೆಂದು ಹಾಗೂ ಇನ್ನೊಂದು ವ್ಯವಸ್ಥೆಯಲ್ಲಿ 360 ದಿನಗಳ ರೂಪಣೆ ಇದೆ.

ನಾಝಿಕಾ ಪರಿವರ್ತನೆ:

ಘಟಿಕಾ/ಘಳಿಗೆ ಪದ್ಧತಿಯಿಂದ ’ತಾಸು’ ಪದ್ಧತಿಗೆ ಸುಲಭವಾಗಿ ಪರಿವರ್ತಿಸಿಕೊಳ್ಳುವ ವ್ಯವಸ್ಥೆಯೂ ಇಲ್ಲಿದೆ.

ಭಾವ-ಬಲಗಳನ್ನು ಗುರುತಿಸುವ ವಿಧಾನ:

ವ್ಯಕ್ತಿಯ ಭಾವ, ಬಲಗಳನ್ನು ನಿಗದಿಗೊಳಿಸುವಲ್ಲಿ, ಇಲ್ಲಿ ಲಭ್ಯವಿರುವ ಎರಡು ವಿಧಾನಗಳಲ್ಲಿ ನಿಮಗೆ ಅನುಕೂಲಕರವಾದ ವಿಧಾನವನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಬುಧನ ಸ್ಥಾನದ ಜೊತೆಗೆ ಇರುವ ಸಂಪರ್ಕ ಹಾಗೂ ಬುಧನು ಜಾತಕನಿಗೆ ಸಹಕಾರಿಯಾಗಿರುವ ಹಂತದ ವಿವರಣೆ ಕೊಡುವ ಪದ್ಧತಿ ಇದೆ.

ಸುಲಭ ಉಪಯೋಗ:

ಈ ಕನ್ನಡ ಜಾತಕ ತಂತ್ರಾಂಶವು ಉಪಯೋಗಿಸಲು ಅತ್ಯಂತ ಸರಳ ಹಾಗೂ ಸುಲಭವಾಗಿದೆ. ಇಲ್ಲಿ ನೀಡಲ್ಪಟ್ಟಿರುವ ಆಯ್ಕೆ ಪಟ್ಟಿಯಲ್ಲಿನ ಹಂತಗಳು ಸುಲಭ ಗ್ರಾಹ್ಯವಾಗುವಂತೆ ರೂಪಿಸಲ್ಪಟ್ಟಿವೆ. ಮತ್ತು ವರದಿಯನ್ನು ಪಡೆಯುವಲ್ಲಿ ಅತ್ಯಂತ ನಿಖರವಾದ ಗಣನಾ ಕ್ರಮದಲ್ಲಿ ಪಡೆಯ ಬಹುದಾಗಿದೆ.

ಉಚಿತ ಪಂಚಾಂಗದ ತಂತ್ರಾಂಶ:

ಇದೀಗ ಕನ್ನಡ ಜ್ಯೋತಿಷ್ಯ ಶಾಸ್ತ್ರದ ತಂತ್ರಾಂಶವು ಮತ್ತೊಂದು ಕೊಡುಗೆಯೊಂದಿಗೆ ರೂಪಗೊಳ್ಳುತ್ತಿದೆ. ಅಂದರೆ, ಈಗಾಗಲೇ ಅತ್ಯಂತ ಜನಪ್ರೀಯ ವಾಗಿರುವ “ಸ್ಟಾರ ಕ್ಲಾಕ್ -VX” ವ್ಯವಸ್ಥೆಯನ್ನು ಒಅಳಗೊಂಡ ಕನ್ನಡ ಜ್ಯೋತಿಷ್ಯ ಪಂಚಾಂಗದ ತಂತ್ರಾಂಶಾವನ್ನೂ ಸಂಪೂರ್ಣವಾಗಿ, ಉಚಿತವಾಗಿ ಈ ಮೂಲಕ ಕೊಡಲಾಗುತ್ತಿದೆ!! ಇಲ್ಲಿರುವ ಹಲವು ವಿಶೇಷ ಸವಲತ್ತುಗಳ ಪೈಕಿ, ಮುಖ್ಯವಾದುದೆಂದರೆ, ನೀವು ಇಲ್ಲಿ ಎರಡು ಭಾಷೆಯಲ್ಲಿಯೂ ವಿವರಗಳನ್ನು ಪಡೆಯಬಹುದು. ಅಂದರೆ, ನೀವು ವರದಿಯನ್ನು ಇಂಗ್ಲೀಷ ಅಥವಾ ಕನ್ನಡಭಾಷೆಯಲ್ಲಿ ಪಡೆಯ ಬಹುದು. ಗ್ರಹಗಳ ಸ್ಥಾನ ಮಾನ – ಬಲಾಬಲ – ಅವುಗಳ ಚಲನೆಯ ವಿವರಗಳು- ನಿಖರವಾಗಿ ರಾಹು-ಕೇತುಗಳ ಸಮಯ ಗಣನೆ – ಮುಹೂರ್ತದ ಪ್ರಾರಂಭದ ಅವಧಿ ಹಾಗೂ ಮುಕ್ತಾಯದ ಅವಧಿಯ ಗಣನೆ – ಇತ್ಯಾದಿಗಳೆಲ್ಲ ಇಲ್ಲಿ ಸುಲಭವಾಗಿ ಲಭ್ಯವಿವೆ.

close

IBM Compatible PC, 24x CD ROM Drive, 128mb RAM, MS-Windows 98 and above (Excluding Vista 64 Bit and Windows 7 64 Bit)

ವಿವರವಾದ ಲಕ್ಷಣಗಳು

ಈ ಕನ್ನಡ ತಂತ್ರಾಂಶದಲ್ಲಿ ಕೊಟ್ಟಿರುವ ಗಣನಾ ಪದ್ಧತಿಯು ಈ ಕೆಳಕಂಡ ಅಂಶಗಳನ್ನು ಹೊಂದಿರುತ್ತದೆ.

ಜನ್ಮದಾಖಲೆಯ ದತ್ತಾಂಶದ ಆಧಾರದ ಮೇಲೆ ಜ್ಯೋತಿಷ್ಯದ ಮಹತ್ವ:

ಈ ಕನ್ನಡ ಜ್ಯೋತಿಷ್ಯ ತಂತ್ರಾಂಶವು ಜನ್ಮ ನಕ್ಷತ್ರದ ಆಧಾರದಲ್ಲಿಯೇ ಉಳಿದ ವಿವರಗಳನ್ನು ಗಣಿಸುತ್ತದೆ. ಜೊತೆಜೊತೆಗೆ ಆಯಾ ನಕ್ಷತ್ರದ ಉಳಿದ ಅಂಶಗಳನ್ನೂ ಸಹಿತವಾಗಿ ಕೊಡುತ್ತದೆ. ಉದಾಹರಣೆಗಾಗಿ- ನಕ್ಷತ್ರ ಪಾದ, ಜನ್ಮರಾಶಿ, ರಾಶಿ ದೇವತೆ, ಲಗ್ನ, ಲಗ್ನ ದೇವತೆ, ತಿಥಿ, ದಿನಮಾನ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಜನ್ಮದಿನ, ಕಲಿ ಶಕೆಯ ವಿವರ, ನಕ್ಷತ್ರಾಧಿಪತಿ, ಗನ, ಯೋನಿ, ಪ್ರಾಣಿ, ಪಕ್ಷಿ, ಮರ, ಚಂದ್ರಾವಸ್ಥಾ, ಚಂದ್ರ ವೇಳೆ, ಚಂದ್ರ ಕ್ರಿಯಾ, ದತ್ತ ರಾಶಿ, ಕರಣ, ನಿತ್ಯ ಯೋಗ, ಸೂರ್ಯನ ಸ್ಥಾನ ಮಾನ, ರಾಶಿ-ನಕ್ಷತ್ರಗಳ ಸ್ಥಿತಿ-ಸ್ಥಾನ, ಅಂಗಾದಿತ್ಯದ ಸ್ಥಾನ, ಯೋಗಿ ದೃಷ್ಟಿ, ಯೋಗಿ ನಕ್ಷತ್ರ, ಯೋಗಿ-ಗ್ರಹ, ಪರ್ಯಾಯ ಯೋಗಿ, ಅವಯೋಗಿ-ನಕ್ಷತ್ರ – ಗ್ರಹ, ಆತ್ಮಕಾರಕ, ಕರ್ಕಾಂಶ, ಅಮಾತ್ಯಕಾರಕ ಲಗ್ನಾ ರೂಢ (ಪಾದ)/ ಥಾನು/ಮತ್ತು ಧನಾರೂಢ ವಿವರಗಳು ಇಲ್ಲಿ ಸುಲಭವಾಗಿ ಲಭ್ಯವಿದೆ.

ಸಾಯನ ಮತ್ತು ನಿರಯನ ಪದ್ಧತಿಯಲ್ಲಿ ಗ್ರಹಗಳ ರೇಖಾಂಶ ಗಣನೆ:

ಭಾರತದಲ್ಲಿ, ನಿರಯನ ಪದ್ಧತಿಯ ಪ್ರಕಾರ, ಗ್ರಹಗಳ ರೇಖಾಂಶವನ್ನು ಗುರುತಿಸುವಲ್ಲಿ, ಸಾಯನ ಪದ್ಧತಿಯ ಆದಾಯದಲ್ಲಿಯೇ ರೂಪಿಸಲ್ಪಟ್ಟಿರುತ್ತದೆ. ಇಲ್ಲಿ ಕೊಟ್ತಿರುವ ಎಲ್ಲ ಕನ್ನಡ ತಂತ್ರಾಂಶದಲ್ಲಿನ ವಿವರ ಪಟ್ಟಿಕೆಯಲ್ಲಿ ( ಚಾರ್ಟಿನಲ್ಲಿ) ಸಂಪೂರ್ಣವಾಗಿ ವೇದದ ಆಧಾರದಲ್ಲಿ ರೂಪಿಸಲ್ಪಟ್ಟಿರುವ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿಯೇ ನಿರೂಪಿಸಲ್ಪಟ್ಟಿರುತ್ತದೆ. ನಿರಯನ ಪದ್ಧತಿಯಲ್ಲಿ, ಗ್ರಹಗಳ ರೇಖಾಂಶ, ಅದರ ರಾಶಿ, ಆ ರಾಶಿಯ ರೇಖಾಂಶ, ಅದರ ನಕ್ಷತ್ರ, ನಕ್ಷತ್ರದ ಪಾದ, ಎಲ್ಲವೂ ಗಣಿಸಲ್ಪಟ್ಟಿರುತ್ತದೆ. ಅದೂ ಅಲ್ಲದೇ, ನಕ್ಷತ್ರ ಹಾಗೂ ನಕ್ಷತ್ರಾಧಿಪತಿ, ಅಧಿದೇವತೆಗಳು ಹಾಗೂ ಅವರ ಅಧೀನದಲ್ಲಿನ ದೇವತೆಗಳನ್ನೂ ಸಹಿತವಾಗಿ ಸುಲಭ ಗ್ರಾಹ್ಯವಾಗುವಂತೆಯೇ ರೂಪಿಸಲ್ಪಟ್ಟಿರುತ್ತದೆ. ಗ್ರಹದ ಸ್ಥಾನಮಾನದ ನಿರೂಪಣೆಯಲ್ಲಿ ನಿರಯನ ಪದ್ಧತಿಯಲ್ಲಿನ ರೇಖಾಂಶ ಗಣನೆಯ ಸಂಕ್ಷಿಪ್ತ ವಿವರಗಳನ್ನು ಇಲ್ಲಿ ಕೊಟ್ಟಿರುವದಲ್ಲದೇ ಜೊತೆಗೆ ಕುಂಡಲಿ ವಿವರಗಳು, ನವಾಂಶ ವಿವರಗಳನ್ನೂ ಸಹಿತವಾಗಿ ಈ ಕನ್ನಡ ತಂತ್ರಾಂಶದ ವ್ಯವಸ್ಥೆಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ. ಅದೂ ಅಲ್ಲದೇ ದಶ ಹಾಗೂ ಬಾಕಿ ಉಳಿದಿರುವ ದಶದ ಅವಧಿಯ ವಿವರಗಳನ್ನು, ಜನ್ಮದಾಖಲೆಯ ದಿನದೊಂದಿಗೆ ಕುಂಡಲಿಯ ವಿವರ ಹಾಗೂ ನವಮಾಂಶದ ವಿವರಗಳನ್ನು ರೂಪಿಸಲು ಸುಲಭವಾಗುವಂತೆ ಜೋಡಿಸಲಾಗಿದೆ.

ಈ ಕನ್ನಡ ಜಾತಕದ ತಂತ್ರಾಂಶದ ಜೊತೆಯಲ್ಲಿ ಒಂದು ವಿಶೇಷವಾದ ರಾಶಿ ಚಕ್ರದ ವಿವರಗಳನ್ನು ಒಳಗೊಂಡ ಪಟ್ಟಿಯನ್ನು ಕೊಡಲಾಗಿದೆ. ಅದರಲ್ಲಿ ಈ ಗ್ರಹದ ನವಾಂಶವು ವಿಪರೀತ ಗತಿಯಲ್ಲಿ ಇದೆಯೋ ಅಥವಾ ಉತ್ಕರ್ಷದಲ್ಲಿ ಇದೆಯೋ, ದುರ್ಬಲಗೊಂಡಿದೆಯೋ ಇಲ್ಲವೆ ಉಗ್ರ ಹಂತದಲ್ಲಿದೆಯೋ ಎನ್ನುವ ವಿವರಗಳನ್ನು ಒಳಗೊಂಡಿರುತ್ತದೆ.

ಭಾವ ವಿವರಣೆಗಳ ಪಟ್ಟಿ:

ಈ ಕನ್ನಡ ಜ್ಯೋತಿಶ್ಯದ ತಂತ್ರಾಂಶವು ಬ್ನ್ಹಾವದ ವಿವರಗಳನ್ನು ಒದಗಿಸುವ ಒಂದು ವಿವರಣಾ ಪಟ್ಟಿಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಭಾವದ ಆರಂಭ, ಮಧ್ಯಮ ಸ್ಥಿತಿ ಮತ್ತು ಅಂತ್ಯದ ಸ್ಥಿತಿಯ ವಿವರಗಳನ್ನು ಜೊತೆಗೆ ಸಂಬಂಧಿತ ಭಾವದೊಂದಿಗೆ ಇರುವ ಗ್ರಹಗಳ ವಿವರಗಳು ಲಭ್ಯವಿವೆ.

ಉಪಗ್ರಹಗಳ ವಿವರಣೆಯ ಪಟ್ಟಿ:

ಪ್ರತಿಯೊಂದು ಗ್ರಹದೊಂದಿಗೆ ಸಂವಾದಿಯಾಗಿರುವ ಉಪಗ್ರಹಗಳ ವಿವರಣೆಯನ್ನು ಒದಗಿಸುವ ಪಟ್ತಿಯೊಂದನ್ನು ಈ ಕನ್ನಡದ ಜಾತಕದ ತಂತ್ರಾಂಶವು ಹೊಂದಿರುತ್ತದೆ. ಚಂದ್ರ, ಶುಕ್ರ, ರಾಹು-ಕೇತು, ಮಂಗಳ ಗ್ರಹಗಳು ಸೂರ್ಯನ ರೇಖಾಂಶದೊಂದಿಗೆ ಸ್ಥಾನ ಹೊಂದಿದ್ದು, ಆ ಮೂಲಕವೇ ಅವುಗಳ ಸ್ಥಾನ ಮೌಲುಅವನ್ನು ನಿಗದಿಗೊಳಿಸಲಾಗಿದೆ. ಈ ಗ್ರಹಗಳ ಧೂಮಾದಿ ಬಳಗದ ವಿಷಯವಾಗಿ, ಅವುಗಳ ಗಣನಾ ಪದ್ಧತಿಯ ವಿವರಗಳನ್ನು ಒಳಗೊಂಡ ವಿವರಣಾ ಪಟ್ಟಿಯು ಇಲ್ಲಿ ಲಭ್ಯವಿದೆ. ಈ ಉಪಗ್ರಹಗಳ ರೇಖಾಂಶವನ್ನು ಸಹಿತ ಇಲ್ಲಿ ಪರಿಗಣಿಸಲಾಗಿದೆ. ಮತ್ತು ಇದು ಸುಲಭವಾಗಿ ಗ್ರಾಹ್ಯವಾಗುವಂತೆ ಗಣಿಸಿ, ಆಯ್ಕೆ ಮಾಡಿಕೊಳ್ಳಲು ಅನುಕೂಲಕರವಾಗುವಂತೆಯೇ ವಿವರಣಾ ಪಟ್ಟಿಯಲ್ಲಿ ನೀಡಲಾಗಿದೆ. ಇಲ್ಲಿ ಉಪಗ್ರಹಗಳ ನಕ್ಷತ್ರಾಧಿಪತಿ, ಉಪದೇವತೆ, ಈ ಉಪದೇವತೆಯ ಅಧೀನದಲ್ಲಿರುವ ದೇವತೆಗಳಸ್ ವಿವರಗಳನ್ನೂ ಸಹಿತ ನೀಡಲಾಗಿದೆ. ಉಪಗ್ರಹಗಳ ರಾಶಿಚಕ್ರವನ್ನೂ ಸಹಿತ ರೂಪಿಸಲಾಗಿದ್ದು ಅದೂ ಸಹಿತ ಇಲ್ಲಿ ಲಭ್ಯವಿದೆ.

ಆರೂಡ ಚಕ್ರ:

ಈ ಅಸ್ಟ್ರೋಪ್ಯಾಕ ಕನ್ನಡ ಜೋತಿಷ್ಯ ತಂತ್ರಾಂಶವು, ಸಂವಾದಿಯಾಗಿರುವ ಆರೂಡ ಚಕ್ರದ ವಿವರಗಳನ್ನು ರೂಪಿಸಲು ಅನುಕೂಲವಾಗುವಂತೆ, ಆ ಆರೂಢ ಚಕ್ರದ ವಿವರಣಾ ಪಟ್ಟಿಯನ್ನು ಒಳಗೊಂಡಿರುತ್ತದೆ.

ಷೋಡಶವರ್ಗ ವಿವರಣ ಪಟ್ಟಿ:

ಈ ಅಸ್ಟ್ರೋಪ್ಯಾಕ ಕನ್ನಡ ಜಾತಕ ತಂತ್ರಾಂಶವು ಷೋಡಶ ವರ್ಗದ ಮೌಲ್ಯವನ್ನು ಗಣಿಸುತ್ತಿದ್ದು, ಅದರ ಸಧ್ಯದ ಸ್ಥಿತಿಯನ್ನು ವಿವರಿಸಲು ಅನುಕೂಲವಾಗುವಂತೆ, ಅದರ ಎಲ್ಲ ಅಂಶಗಳನ್ನೂ ಒಳಗೊಂಡ ವಿವರಣಾ ಪಟ್ಟಿಯೊಂದನ್ನು ಕೊಡಲಾಗಿದೆ.

ಷೋಡಶ ವರ್ಗದ ಅಧಿದೇವತೆಗಳು:

ಈ ಅಸ್ಟ್ರೋಪ್ಯಾಕ ಕನ್ನಡ ಜೋತಿಷ್ಯ ತಂತ್ರಾಂಶವು ಷೋಢಶ ವರ್ಗದ ದೇವತೆಗಳ ವೊಷಯವನ್ನು ಒಳಗೊಂಡಿದ್ದು, ಆಯಾ ದೇವತೆಗಳನ್ನು ಆಯ್ಕೆಮಾಡಿಕೊಳ್ಳಲು ಅನುಕೂಲವಾಗುವಂತೆ ಒಂದು ವಿವರಣಾ ಪಟ್ಟಿಯನ್ನು ಕೊಡಲಾಗಿದೆ.

ವರ್ಗೋತ್ತಮ:

ಈ ಅಸ್ಟ್ರೋಪ್ಯಾಕ ಕನ್ನಡ ಜೋತಿಷ್ಯ ತಂತ್ರಾಂಶವು ವರ್ಗೋತ್ತಮ ಗಣನೆಯ ವಿವರಗಳನ್ನು ಸುಲಭ ಸಾಧ್ಯವಾಗಿಸುತ್ತದೆ.

ವರ್ಗ ಭೇದ:

ಅಸ್ಟ್ರೋಪ್ಯಾಕ ಕನ್ನಡ ಜೋತಿಷ್ಯ ತಂತ್ರಾಂಶವು ಮೌಲ್ಯಗಳನ್ನು ಗಣಿಸುತ್ತದೆ. ಸ್ವವರ್ಗದ ಹಂತ ಅಥವಾ ಉಚ್ಚವರ್ಗದ ಹಂತದಲ್ಲಿನ ಗಣನಾ ಕ್ರಮಾಂಕದ ವಿವರನೆಗಳು ಇಲ್ಲಿವೆ. ವರ್ಗ ಭೇದದ ಕುರಿತು ವಿವರಣಾ ಪಟ್ಟಿಯೂ ಲಭ್ಯವಿದೆ.

ಇತರೇ ವಿವರಣಾ ಪಟ್ಟಿಗಳು:

ಅಸ್ಟ್ರೋಪ್ಯಾಕ ಕನ್ನಡ ಜೋತಿಷ್ಯ ತಂತ್ರಾಂಶವು ರಾಶಿಚಕ್ರ, ಹೋರಾಚಕ್ರ , ದ್ರೆಕ್ಕನ ವಿವರ, ಚತುರ್ಠಾಂಶ ಗಣನ , ಸಪ್ತಮಾಂಶ ಗಣನ, ನವಮಾಂಶ ಗಣನ, ದಶಮಾಂಶ ಗಣನ, ದ್ವಾದಶಾಂಶ ವಿವರ, ಶೋಢಶಾಂಶ ವಿವರ, ವಿಶಾಂಶ ವಿವರಗಳು, ಚತುರ್ವಿಶಾಂಶ ವಿವರ, ಭಾಂಶ, ತ್ರಿಶಾಂಶ ವಿವರ, ಖವೇದಾಂಶ ವಿವರ, ಅಕ್ಷವೇದಾಂಶ ವಿವರ, ಹಾಗೂ ಷಷ್ಠಿಯಾಂಶ ವಿವರಗಳ ಪಟ್ಟಿಯನ್ನು ಹೊಂದಿರುತ್ತದೆ.

ದಶಾ ಮತ್ತು ಭುಕ್ತಿ (ಅಪಹಾರ) ಅವಧಿ:

ಪ್ರತಿಯೊಂದು ದಶಾ ಅವಧಿಯಲ್ಲಿ ಪ್ರತಿಯೊಂದು ಭುಕ್ತಿಯ ಆರಂಭ ಹಾಗೂ ಅಂತ್ಯದ ವಿವರಗಳನ್ನು ವಿವರವಾಗಿ ಇಲ್ಲಿ ಪಟ್ಟಿ ಮಾಡಿ ಕೊಡಲಾಗಿದೆ.

ಪರ್ಯಾಂತರ ದಶಾ:

ಪ್ರತಿಯೊಂದು ಭುಕ್ತಿಯಲ್ಲಿ (ಅಪಹಾರದಲ್ಲಿ) ಬರುವ ಪರ್ಯಾಂತರ ದಶಾದ ಆರಂಭ ಹಾಗೂ ಅಂತ್ಯದ ವಿವರಗಲ್ಳನ್ನು ಈ ಅಸ್ಟ್ರೋಪ್ಯಾಕ ಕನ್ನಡ ಜೋತಿಷ್ಯ ತಂತ್ರಾಂಶವು ಒಳಗೊಂಡಿರುತ್ತದೆ.

ಅಷ್ಟಾವಕ್ರ ವಿವರಣಾ ಪಟ್ಟಿ:

ಅಸ್ಟ್ರೋಪ್ಯಾಕ ಕನ್ನಡ ಜೋತಿಷ್ಯ ತಂತ್ರಾಂಶವು ಅಷ್ಟಾವಕ್ರದ ವಿವರಗಳನ್ನು ಒಳಗೊಂಡ ಒಂದು ಪಟ್ಟಿಯನ್ನು ಹೊಂದಿರುತ್ತದೆ. ಅದರಲ್ಲಿ ಚಂದ್ರ ಅಷ್ಟಾವಕ್ರ, ಸೂರ್ಯ ಅಷ್ಟಾವಕ್ರ, ಬುಧ ಅಷ್ಟಾವಕ್ರ, ಶುಕ್ರ ಅಷ್ಟಾವಕ್ರ, ಕುಜ ಅಷ್ಟಾವಕ್ರ, ಗುರು ಅಷ್ಟಾವಕ್ರ, ಶನಿ ಅಷ್ಟಾವಕ್ರ ಹಾಗೂ ಸರ್ವ ಅಷ್ಟಾವಕ್ರದ ಗಣನೆಯ ವಿವರಗಳನ್ನು ಒದಗಿಸುವ ವಿವರಣಾ ಪಟ್ಟಿ ಇದೆ.

ಗ್ರಹ ಮುಕ್ತಿಯ ವಿಶ್ಲೇಷಣೆ:

ಪ್ರತಿಯೊಂದು ಗ್ರಹ ಮುಕ್ತಿಯ ವಿವರದಲ್ಲಿ ಆ ಗ್ರಹದ ಭಾವಾಧಿಪತಿ ಗ್ರಹದ ಯೋಗ, ಗ್ರಹದ ಯೋಗ, ಗ್ರಹಗಳ ಸಂಬಂಧ, ಗ್ರಹದ ಸ್ಥಾನದ ವಿವರಗಳು, ಅನುಕೂಲಕಾರಕ ಗ್ರಹಗಳು ಹಾಗೂ ತೊಂದರೆ ನೀಡುವ ಗ್ರಹಗಳು ಅವುಗಳ ಪರಿಣಾಮ, ಗ್ರಹ ಮೈತ್ರಿಯ ವಿವರಗಳು, ಷಷ್ಟಾಂಶದಲ್ಲಿ ಧೃಕ್-ಬಲದ ವಿವರಗಳು, ಷಡ್ಬಲದ ಪಟ್ಟಿ, ಭಾವಧೃಕ ಬಲದ ಪಟ್ಟಿ, ಕುಜದೋಷದ ಪರೀಕ್ಷೆ,, ಮೌಧ್ಯಂ, ಗ್ರಹಗಳ ಯುತಿ ಮತ್ತು ಗ್ರಹಾವಸ್ಥೆಯ ವಿವರಗಳೆಲ್ಲ ಈ ತಂತ್ರಾಂಶದಲ್ಲಿ ಲಭ್ಯವಿದೆ.

ವಿಂಶೋತ್ತರಿ ದಶಾ ಅವಧಿ:

ಅಸ್ಟ್ರೋಪ್ಯಾಕ ಕನ್ನಡ ಜೋತಿಷ್ಯ ತಂತ್ರಾಂಶದಲ್ಲಿ ವಿಂಶೋತ್ತರೆ ದಶ ಅವಧಿಯ ಸಂಕ್ಷಿಪ್ತ ವಿವರಣೆಗಳನ್ನು ಒದಗಿಸಲಾಗಿದೆ.

ಜಾತಕಾಂಶದಲ್ಲಿ ಗ್ರಹಗಳ ವಿಶೇಷ ಹೊಂದಾಣಿಕೆ (ಯೋಗ)

ಗ್ರಹಗಳ ಸುಲಗ್ನತೆಯ ಮೂಲಕ ಲಭ್ಯವಾಗುವ ವಿಶೇಷ ಯೋಗಗಳ ಕುರಿತು, ಅವುಗಳನ್ನು ಜಾತಕದಲ್ಲಿ ಗುರುತಿಸುವ ಮತ್ತು ಅದರ ಪರಿಣಾಮವನ್ನು ವಿವರಿಸುವ ಒಂದು ವಿವರಣಾ ಪಟ್ಟಿಯೂ ಇಲ್ಲಿ ಲಭ್ಯವಿದೆ. ಯೋಗವನ್ನು ಪರಿಗಣಿಸುವಲ್ಲಿ ಹಾಗೂ ಇಂತಹ ಯೋಗವನ್ನು ನಿರ್ಧರಿಸುವಲ್ಲಿ ಗ್ರಹಗಳ ಸಂಯೋಗದ ವಿವರಣೆಗಳೂ ಸಹಿತ ಇಲ್ಲಿ ಸುಲಭವಾಗಿ ಲಭ್ಯವಾಗುವಂತೆ ತಂತ್ರಾಂಶವನ್ನು ರೂಪಿಸಲಾಗಿದೆ.


AstroPack Kannada Astrology Software Data Entry page
Enter the details required for
Generating the computer horoscope
AstroPack Kannada Astrology Software preference and options settings
Prepare Computer Horoscope in various chart styles
includes Various ayanamsam settings,
such as Chitra Paksha
ayanamsam or Lahiri ayanamsam, Raman ayanamsam, Krishnamurthy ayanamsam and Thirukanitham ayanamsam
AstroPack Kannada Astrology Software Atlas
Includes a large database of cities
from all over the world.
AstroPack Kannada Astrology Software Report View
The Introduction section of the horosc
ope
AstroPack Kannada Astrology Software Calculations Section
Calculation of piranda nakshatram and
associated nakshatram qualities. Basic Calculations
such as Sayana and Nirayana Longitude
of Planets Various charts
are prepared after making the necessary
calculations
AstroPack Kannada Astrology Software Analysis Section
Positional Analysis Section
which also Includes Yogas
AstroPack Kannada Astrology Software Report Settings
Fully Customisable Horoscope report Options
AstroPack Kannada Astrology Software Nazhika / Vinazhika Convertor
Includes a Naligai or
Nazhika to hour convertor
ಅವಶ್ಯವಿರುವ ತಾಂತ್ರಿಕ ಸೌಲಭ್ಯ :
system requirements
ಐ.ಬಿ.ಎಂ. ಕಂಪ್ಯಾಟೇಬಲ್ ಕಂಪ್ಯೂಟರ 1GB ರಾಮ, ಎಂ.ಎಸ್.ವಿಂಡೋ 98 ಇರಬೇಕು
free astrology software download

Its combination of products which is financially economical and good for bureau as well as professionals

Combination of money saving Indian Astrology products

Available Languages

 • English
 • Hindi
 • Telugu
 • Tamil
 • Malayalam
 • Kannada
Indian Astrology Software Collection
English+Hin+Tel+Tam+Mal+Hindi+Kan
various languages

The Ultimate Mobile Astrology Software for Astrologers

Combination of money saving Indian astrologyproducts

StarClock ME

 • Raasi
 • Navamsaka
 • Bhavam
 • Astro Moment
 • Astro Day
 • Dasa
 • Spudam
 • Papa Samyam
 • Prasna
indian astrology software collection
Eng + 1 Regional Lan. (Tel/Tam/Mal/Kan/Hin/Bngli)
all languages
client testimonials

good opinion Since 25 years I am using Astro-vision software for
personal future prediction and
muhurthas preditions. The predictions are 100% accurate and based on Indian astrology... very good software


Indian Astrology clients testimonials
P.G Nambiar
Astrologer

Testimonials Disclaimer

Find more info about Astro-Vision's Astrology Software products on Google+
by Astro-Vision Futuretech Pvt. Ltd.

Asterisk Icon 100% accurate Asterisk Icon Based on Indian Astrology Asterisk Icon Multilingual Asterisk Icon User friendly Asterisk Icon Over 2 decades of experience